ಶ್ರೀಮದ್ಭಗವದ್ಗೀತೆ (ಕನ್ನಡ) ಶ್ರೀವ್ಯಾಸರಾಯರು

 #ಶ್ರೀವ್ಯಾಸರಾಯರು ಶ್ರೀಮದ್ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿರುವ ಸಾರವನ್ನು ತೆಗೆದು ಹದಿನೆಂಟು ನುಡಿಗಳಲ್ಲಿ ಕನ್ನಡದ ಪದ್ಯ ರೂಪದಲ್ಲಿ ರಚಿಸಿದರು.

ನಿತ್ಯ ಪಾರಾಯಣ ಮಾಡುವವರಿಗೆ ಸಂಸ್ಕೃತವನ್ನರಿಯದ ಸುಜೀವಿಗಳಿಗೆ ಪಠಿಸಲು ನೀಡಿದರು, ಅದು ಅತ್ಯಂತ ಸ್ವಾರಸ್ಯವಾಗಿದೆ.
ಶ್ರೀಮದ್ಭಗವದ್ಗೀತೆ (ಕನ್ನಡ)
ಕೇಳಯ್ಯ ಎನ ಮಾತು ಪಾರ್ಥನೇ ಗೀತಾದರ್ಥನೇ ಕುರುಕ್ಷೇತ್ರದೀ | ಎನ್ನುವರು ಪಾಂಡವರು | ಪೇಳೋ ಸಂಜಯ | ಏನು ಮಾಡುವರು ಕೂಡೀ || ಕೇಳೈ ಆರಸನೇ | ನೋಡು ಪಾಂಡವರಸೇ ನಾ! ಮಾತಾಡಿದ ನಿನ್ನ ಸುತಗೆ ದ್ರೋಣನಿಂದು ||೧||
ಕೇಳಿತಾ ಪಾರ್ಥನು ಕುರುದಂಡ | ರಣದಲಿಚಂಡ | ಗಾಂಡೀವ ಕರದಂಡ ! ಆಚ್ಯುತ ಪಿಡಿರಥ ನಡೆ ಮುಂದೆ | ಬಹುತ್ವರದಿಂದೇ | ನೋಡುವೆ ನೇತ್ರದಿಂದ | ಗುರುಹಿರಿಯರ ಕೂಡಯಾಕೆಂದ | ಯುದ್ಧ ಸಾಕೆಂದ | ಭಿಕ್ಷವೇ ಲೇಸೆಂದಾ ಕುಂತಿಸುತ
ಈ ಮಾತು ಉಚಿತವಲ್ಲ | ನಿನಗಿದಸಲ್ಲ | ಪಿಡಿಗಾಂಢೀವ ಬಿಲ್ಲಾ||೨||
ಬಾಲ್ಯಯವ್ವನ ಮುಪ್ಪು ತನದೇಹವಲ್ಲಿ ಇಂಥ ದೇಹಕೆ ಮೋಹ ಮತ್ಯಾತಕಲ್ಲಿ ಕಾಯ್ದು ಕೊಲ್ಲುವ ನಾನು ಇರುತಿರಲು ಇಲ್ಲಿ
ಬಿಲ್ಲುಪಿಡಿದು ಕೀರ್ತಿ ಪಡೆ ಲೋಕದಲ್ಲಿ ||೩||
ಶಸ್ತ್ರದಂಜಿಕೆಯಿಲ್ಲ ಜೀವಕ್ಕೆ| ಈ ದೇಹಕ್ಕೆ ಪಾವಕನ ದಾಹಕ್ಕೆ | ಉದಕಗಳಿಂದ ವೇದನೆ ಯಾಕೆ | ಈ ಜೀವಕ್ಕೆ | ಮಾರುತನ ಶೋಷಕ್ಕೆ | ನಿತ್ಯ ಅಭೇದ್ಯತಾ ಜೀವನ | ಸನಾ ತನ | ವಸ್ತ್ರದ್ಧಾಂಗೆ ಈ ತನವು ! ಆದಾವು ಪೋದಾವು ನನಗಯ್ಯಾ |ಅದನಾಬಲ್ಲೆನಯ್ಯಾ||೪||
ಜ್ಞಾನದೊಡ್ಡದು | ಕರ್ಮಬಂಧವ ಬಿಟ್ಟು ಕರ್ಮ ಬಿಟ್ಟರೆ ಪ್ರತ್ಯವಾಯುವೆಷ್ಟು
ಫಲ ಬಿಟ್ಟು ನೀ ಮಾಡ ಕರ್ಮಗಳ ಸಮದೇಹಕ್ಕೆ ಫಲಕರ್ಮ ಕಾರಣವಲ್ಲ||೫||
ಕರ್ಮದಲ್ಲೇ ನಿನಗಧಿಕಾರ | ಫಲತಾದೂರ | ಧನಂಜಯ ಗೋಸ್ಕರ | ಜ್ಞಾನದೊಡ್ಡದು ಕರ್ಮ ದೂರಯ್ಯ । ಇತ್ತ ಬಾರಯ್ಯಾ ಯೋಗ ಬುದ್ಧಿ ಮಾಡಯ್ಯಾ | ಚಿತ ಬುದ್ದಿ ಯಾವ । ದೈ ಕೇಶವ | ಜಗತ್ವಾಶವ | ನೋಡಿದೆ ಪರಮೇಶ | ಗೋವಿಂದ ನಲ್ಲಿ ಮನವಿಟ್ಟವ |
ಕಾಮ ಬಿಟ್ಟವ ಜಿತದೇಹತಾನಾವ ||೬||
ಜ್ಞಾನ ದೊಡ್ಡದು ಕರ್ಮದಲ್ಯಾಕೆ ಎನ್ನ | ಬುದ್ದಿ ಮೋಹಿಸೀ ಕೃಷ್ಣ ಕೇಳಯ್ಯ ಬಿನ್ನ | ಕರ್ಮವಿಲ್ಲದೇ ಮೋಕ್ಷ ಫಕವುಂಟೆ ಇನ್ನಾ | ಕರ್ಮಮೋಕ್ಷದ ಬುದ್ಧಿಗೇ ಬೀಜವಿಲ್ಲೆ?||೭||
ಯುದ್ಧಕರ್ಮವ ಮಾಡೋ ಪಾಂಡವಾ | ರಣತಾಂಡವಾ | ವೈರಿ ಪಂಡನೆಂಬುವಾ | ಜನರೆಲ್ಲ ಮಾಳ್ಪಿರೋ ನಿನ್ನ ನೋಡಿ ಮತ್ತೇನ ನೋಡಿ | ನೋಡಿದರೆ ನೀ ಬೇಡೀ | ಎನಗ್ಯಾಕೆ ಪೇಳಯ್ಯ ಜನ ಕರ್ಮ | ಕ್ಷತ್ರಿಯಧರ್ಮ | ನಷ್ಟವಾಗುವದು ಧರ್ಮ | ಅರ್ಪಿಸು ಎನ್ನಲ್ಲಿ ಸರ್ವವು | ಬಿಟ್ಟು ಗರ್ವವು | ತಿಳಿ ಎನ್ನೊಳು ಸರ್ವಪು||೮||
ಯೋಗ ಸನ್ಯಾಸವೆರಡು ಮುಕ್ತಿಗೆ ದೃಢವು ಭೋಗವರ್ಜಿತ ಕೇಳು ಸನ್ಯಾಸಿಯಿರವು | ಹೇಗೆ ಪದ್ಮಕೆ ಪಾಚೆಯ ಲೇಪವಿಲ್ಲ ಹಾಗೆ ಭಕ್ತಿಗೆ ಸಂಸ್ಕೃತಿಯು ಇಲ್ಲ||೯||
ಅಜನಲ್ಲಿ ದ್ವಿಜನಲ್ಲಿ ಗಜದಲ್ಲಿ | ಸಮನಾನಲ್ಲಿ | ಭಜಿಪರ ಮನದಲ್ಲಿ | ಮನಸು ಯಾರ ಜೀವಕೆ ಬಂದು | ಇತ್ತ ಬಾರದುದು ಮತ್ತೆ ವೈರಿದಾರೆಂದು | ಲೋಷ್ಠಕಾಂಚನ ನೋಡು ಸಮ ಮಾಡಿ | ಆಸನ ಹೂಡಿ | ನಾಸಿಕ ತುದಿ ನೋಡಿ | ಧ್ಯಾನ ಮಾಡು ಹರಿ ಅಲ್ಲಿಹ ಅವನಲ್ಲಿಹ | ಯೋಗ ಸನ್ನಿಹಿತನವನೇ||೧೦||
ಯಾರ ಭಕ್ತಿಯು ಎನ್ನ ಪಾಜೀಬ್ಜ ದಲ್ಲಿ ಆ ಘೋರ ಸಂಸಾರ ಯಾತನೆ ಅವರಿಗೆಲ್ಲಿ | ಶರೀರವೇ ಕ್ಷೇತ್ರವೆಂತೆಂದು ತಿಳಿಯೋ||೧೧||
ಮರೆಯದೇ ಕ್ಷೇತ್ರಜ್ಞನೆಂದೆನ್ನ ತಿಳಿಯೋ ಶರೀರದೊಳಗಿದ್ದು ಪಾಪಿಲ್ಲ | ದುಃಖಲೇಪಿಲ್ಲ | ಆಕಾಶವು ಎಲ್ಲಾ | ಯಾತರಿಂದ್ಹುಟ್ಟಿತು ಈ ಗುಣ | ಮೂರು ಸದ್ಗುಣ ಕೇಳಯ್ಯಾ ಫಲ್ಗೂಣಾ | ಸುಖದುಃಖ ಸಮ ಮಾಡಿನೋಡು ನೀ !ಈಡ್ಯಾಡು ನೀ | ಬ್ರಹ್ಮಾನ ನೋಡೋ ನೀ | ಚಂದ್ರ ಸೂರ್ಯರ ತೇಜಸನದಯ್ಯಾ | ಗುಡಾಕೇಶಯ್ಯಾ | ಅನ್ನ ಪಚನ ಎನದಯ್ಯಾ||೧೨||
ನಾನೇ ಉತ್ತಮ | ಮನಸು ಎನ್ನಲಿ ಮಾಡೋ ಜ್ಞಾನ ಅಜ್ಞಾನ ಪೇಳುವೇ ತಿಳಿದು ನೋಡೋ | ಜ್ಞಾನ ದುರ್ಲಭ ಅವರ ಭಕ್ತಿಗಳಂತೆ ನಾನು ಕೊಡುವೆನು ಫಲವ ಮನಸು ಬಂದಂತೆ||೧೩||
ಸ್ಮರಣೆ ಮಾಡುತ ದೇಹ ಬಿಡುವದೋ ! ಎನ್ನ ಪಡೆವರೋ ಬಲು ಭಕ್ತಿ ಮಾಡುವರೋ | ಆನಂತ ಚೇತನ | ಸುಳಿವೇನು ಹರಿಸಲಭನು | ಮತ್ತೆ ಜನನವಿಲ್ಲವಗೆ | ಎನ್ನ ಭಕ್ತರಿಗಿಲ್ಲ ನಾಶವು | ಸ್ವರ್ಗ ಪಾಶವು | ಬಿಟ್ಟು ಚರಣ ಭಕುತಿಯು||೧೪||
ಕೃಷ್ಣ ತೋರಿಸು ನಿನ್ನ ವಿಭೂತಿರೂಪ ಇಷ್ಟ ಪೂರುತಿಯಾಗಲೋ. ಎನಗೆ ಶ್ರೀಪ | ರಾಮ ನಾನಯ್ಯಾ ರಾಜರ ಗುಂಗಿನಲ್ಲಿ ಸೋಮನಾನಯ್ಯ ತಾರಕ ಮಂಡಲದಲ್ಲಿ||೧೫||
ಅಕ್ಷರದೊಳಗೆ ಅಕಾರನು | ಗುಣಸಾರನು | ಪಕ್ಷಿಗಳಲ್ಲಿ ನಾನು | ಗರುಡನಂ ಸಕಲ ಜಾತಿಗಳಲ್ಲಿ | ಶ್ರೇಷ್ಠತನದಲ್ಲಿ ಎನ್ನ ರೂಪ ತಿಳಿಯಲ್ಲಿ | ತೋರಿಸೋ ಶ್ರೀಕೃಷ್ಣ ನಿನ್ನ ರೂಪ ನಾನಾ ರೂಪ | ಅರ್ಜುನ ನೋಡೋ ರೂಪ | ಕಂಡನು ತನ್ನನು ಸಹಿತಾದಿ | ಹರೀದೇಹದಿ | ಬ್ರಹ್ಮಾಂಡಗಳಲ್ಲಿ||೧೬||
ಕರೆ ಅಕ್ಷರ ಎರಡಕ್ಕೂ ಉತ್ತಮನು ಘೋರ ನರಕಕೆ ಲೋಭ ಕಾಮನು ನಾನು ಸಾರ ದಾನವು ಸಜ್ಜನರ ಹಸ್ತದಲ್ಲಿ| ಭೂರಿ ದಕ್ಷಿಣೆ ನೀಡೋ ಸತ್ಪಾತ್ರದಲ್ಲಿ ||೧೭||
ಸರ್ವ ದಾನದಕ್ಕಿಂತ ಎನ್ನ ಭಕ್ತಿ |
ಕೇಳೋ ಭೂ ಶಕ್ತಿಮಾಡಯ್ಯ ವಿರಕ್ತಿ | ಕೃಷ್ಣ ಹರಣವಾಯ್ತು ನಿನ್ನಿಂದ | ಮೋಹ ಎನ್ನಿಂದ | ಬಹು ಸೂವಾಕ್ಯದಿಂದ | ಕೃಷ್ಣ ಭೀಮಾರ್ಜುನರ ಸಂವಾದ | ಮಹಸುಖಪ್ರದ | ದೃತರಾಷ್ಟ್ರ ಕೇಳಿದ | ಬಲ್ಲೆನು ವ್ಯಾಸರ ದಯದಿಂದ | ಮನಸೀನಿಂದ | ಕೃಷ್ಣನಲ್ಲೇ ಜಯವೆಂದ||೧೮||
||ಕೃಷ್ಣಾರ್ಪಣಮಸ್ತು||

Comments

Popular posts from this blog

ವಾಯುಪುರಾಣದಲ್ಲಿ ತಾಯಿಯ ಶ್ರೀ ವೇದವ್ಯಾಸದೇವರು ತಾಯಿಯ ವೈಭವವನ್ನು ಸಜ್ಜನರ ಮಾಹಿತಿಗಾಗಿ