Posts

ಶ್ರೀಮದ್ಭಗವದ್ಗೀತೆ (ಕನ್ನಡ) ಶ್ರೀವ್ಯಾಸರಾಯರು

  #ಶ್ರೀವ್ಯಾಸರಾಯರು ಶ್ರೀಮದ್ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿರುವ ಸಾರವನ್ನು ತೆಗೆದು ಹದಿನೆಂಟು ನುಡಿಗಳಲ್ಲಿ ಕನ್ನಡದ ಪದ್ಯ ರೂಪದಲ್ಲಿ ರಚಿಸಿದರು. ನಿತ್ಯ ಪಾರಾಯಣ ಮಾಡುವವರಿಗೆ ಸಂಸ್ಕೃತವನ್ನರಿಯದ ಸುಜೀವಿಗಳಿಗೆ ಪಠಿಸಲು ನೀಡಿದರು, ಅದು ಅತ್ಯಂತ ಸ್ವಾರಸ್ಯವಾಗಿದೆ. ಶ್ರೀಮದ್ಭಗವದ್ಗೀತೆ (ಕನ್ನಡ) ಕೇಳಯ್ಯ ಎನ ಮಾತು ಪಾರ್ಥನೇ ಗೀತಾದರ್ಥನೇ ಕುರುಕ್ಷೇತ್ರದೀ | ಎನ್ನುವರು ಪಾಂಡವರು | ಪೇಳೋ ಸಂಜಯ | ಏನು ಮಾಡುವರು ಕೂಡೀ || ಕೇಳೈ ಆರಸನೇ | ನೋಡು ಪಾಂಡವರಸೇ ನಾ! ಮಾತಾಡಿದ ನಿನ್ನ ಸುತಗೆ ದ್ರೋಣನಿಂದು ||೧|| ಕೇಳಿತಾ ಪಾರ್ಥನು ಕುರುದಂಡ | ರಣದಲಿಚಂಡ | ಗಾಂಡೀವ ಕರದಂಡ ! ಆಚ್ಯುತ ಪಿಡಿರಥ ನಡೆ ಮುಂದೆ | ಬಹುತ್ವರದಿಂದೇ | ನೋಡುವೆ ನೇತ್ರದಿಂದ | ಗುರುಹಿರಿಯರ ಕೂಡಯಾಕೆಂದ | ಯುದ್ಧ ಸಾಕೆಂದ | ಭಿಕ್ಷವೇ ಲೇಸೆಂದಾ ಕುಂತಿಸುತ ಈ ಮಾತು ಉಚಿತವಲ್ಲ | ನಿನಗಿದಸಲ್ಲ | ಪಿಡಿಗಾಂಢೀವ ಬಿಲ್ಲಾ||೨|| ಬಾಲ್ಯಯವ್ವನ ಮುಪ್ಪು ತನದೇಹವಲ್ಲಿ ಇಂಥ ದೇಹಕೆ ಮೋಹ ಮತ್ಯಾತಕಲ್ಲಿ ಕಾಯ್ದು ಕೊಲ್ಲುವ ನಾನು ಇರುತಿರಲು ಇಲ್ಲಿ ಬಿಲ್ಲುಪಿಡಿದು ಕೀರ್ತಿ ಪಡೆ ಲೋಕದಲ್ಲಿ ||೩|| ಶಸ್ತ್ರದಂಜಿಕೆಯಿಲ್ಲ ಜೀವಕ್ಕೆ| ಈ ದೇಹಕ್ಕೆ ಪಾವಕನ ದಾಹಕ್ಕೆ | ಉದಕಗಳಿಂದ ವೇದನೆ ಯಾಕೆ | ಈ ಜೀವಕ್ಕೆ | ಮಾರುತನ ಶೋಷಕ್ಕೆ | ನಿತ್ಯ ಅಭೇದ್ಯತಾ ಜೀವನ | ಸನಾ ತನ | ವಸ್ತ್ರದ್ಧಾಂಗೆ ಈ ತನವು ! ಆದಾವು ಪೋದಾವು ನನಗಯ್ಯಾ |ಅದನಾಬಲ್ಲೆನಯ್ಯಾ||೪|| ಜ್ಞಾನದೊಡ್ಡದು | ಕರ್ಮಬಂ...

ವಾಯುಪುರಾಣದಲ್ಲಿ ತಾಯಿಯ ಶ್ರೀ ವೇದವ್ಯಾಸದೇವರು ತಾಯಿಯ ವೈಭವವನ್ನು ಸಜ್ಜನರ ಮಾಹಿತಿಗಾಗಿ

ಅಮ್ಮ " ಎನ್ನುವ ಅಕ್ಷರದಲ್ಲಿ " ಅಮೃತ " ವಿದೆ. " ಅಮ್ಮ " ಎಂಬ ಎರಡಕ್ಷರದಲ್ಲಿ ಅಪ್ಯಾಯತೆ - ಅಂತಃಕರಣ - ವಾತ್ಸಲ್ಯ ತುಂಬಿದೆ. " ಅಮ್ಮ " ಅಂದರೆ..... ಗಾಳಿಗೆ ಗೊತ್ತು. ನಕ್ಷತ್ರಗಳಿಗೆ ಗೊತ್ತು. ಆ " ಚಂದಮಾಮ " ಬಲ್ಲ. ಧರೆ ಬಲ್ಲಳು. ಪ್ರೀತಿ - ತ್ಯಾಗ - ಸಹನೆ - ಧೈರ್ಯ - ಕಳಕಳಿಯ ರೂಪ ಅವಳು. ಸಂಪೂರ್ಣ ಸ್ತ್ರೀ ಆದಾಗ ತನ್ನನ್ನು ಮರೆಯುತ್ತಾಳೆ. ಬರುವ ಕಂದನನ್ನು ಮರೆತೂ ಮರೆಯಳು. ಒಂದೊಂದು ಕ್ಷಣವನ್ನೂ ಅನುಭವಿಸುತ್ತಾಳೆ. ಕಲ್ಪನೆ - ಸ್ಪರ್ಶ - ನೋವುಗಳು ಒಟ್ಟೊಟ್ಟಿಗೆ ಒಂದು ಆ ಕೃತಿಯ ರಚನೆಯನ್ನು ಎಳೆ ಎಳೆಯಾಗಿ ಬಿಡಿಸಿಕೊಳ್ಳುತ್ತಾಳೆ. ಹೊಟ್ಟೆ ತುಂಬಿದ್ದರೂ ತುಸು ಹೆಚ್ಚಾಗಿಯೇ ಆಹಾರವನ್ನು ತೆಗೆದುಕೊಳ್ಳುತ್ತಾಳೆ. ಅಷ್ಟು ವರುಷ ತನಗಾಗಿ ತೋರದ ಕಾಳಜಿಯನ್ನು ಜೋಪಾನವಾಗಿ ಪ್ರಕಟಿಸುತ್ತಾಳೆ. ಬಾಳಿನಲ್ಲಿ ಬಂದು ಹೋದ ಕೆಲವೇ ಕೆಲವು ನೆನಪುಗಳನ್ನು ಆಹ್ವಾನಿಸಿಕೊಳ್ಳುತ್ತಾ ವಾಸ್ತವಿಕವಾಗಿ ಯಾವುದೇ ತೊಂದರೆ ಇದ್ದರೂ ಗಮನಿಸದೇ ಹಣನ್ಮುಖತೆಯೆಡೆಗೆ ಜಾರುತ್ತಾಳೆ. ಎದ್ದಾಗ - ಬಿದ್ದಾಗ - ಒದ್ದಾಗ ಸದ್ದಾಗದಂತೆ ಅವಡುಗಚ್ಚುತ್ತಾಳೆ. ಮಗುವಿಗಾಗಿ ನಗುತ್ತಾಳೆ. ಸೃಷ್ಟಿಯಾದಾಗ ದೃಷ್ಟಿಸಿ ನೋಡುತ್ತಾ ಬಿಂಬ - ಪ್ರತಿಬಿಂಬ - ರೂಪ - ಅನುರೂಪಗಳ ಎಣಿಕೆಯ ಪ್ರಾಣಗಳನ್ನು ಕಣ್ಣಿನಲ್ಲಿ - ತುಟಿಯಲ್ಲಿ - ಕರಗಳಲ್ಲಿ - ಅಪ್ಪುಗೆಯಲ್ಲಿ - ಎದೆಯಲ್ಲಿ ತೋರುತ್ತಾಳೆ. ಹಗಲು - ರಾತ್ರಿ - ನಿದ್ದೆ - ಆಯಾಸಗ...